ಬ್ಯುಟಿರಿಕ್ ಆಮ್ಲ ಎನ್ನುವುದು ಒಂದುಪರ್ಯಾಪ್ತ ಕೊಬ್ಬಿನ ಆಮ್ಲ. ಕೊಬ್ಬಿನ ಅಮ್ಲಗಳನ್ನು ಮೂನೋಕಾರ್ಬೀಕ್ಸಿಲಿಕ್ ಆಮ್ಲಗಳು( )ಎಂದು ಕರೆಯುತ್ತಾರೆ. ಬ್ಯುಟಿರಿಕ್ ಆಮ್ಲ ಎಣ್ಣೆಗಳಲ್ಲಿ ಟ್ರೈ ಗ್ಲಿಜರಾಯಿಡ್ ರೂಪದಲ್ಲಿರುತ್ತದೆ. ಬ್ಯುಟಿರಿಕ್ ಆಮ್ಲವನ್ನು ಶಾಸ್ತ್ರೀಯವಾಗಿ ಬ್ಯುಟನೋಯಿಕ್ ಆಮ್ಲ( )ಎಂದು ಕರೆಯಲಾಗುತ್ತದೆ . ಗ್ರೀಕ್ ಬಾಷೆಯಲ್ಲೂ ಬ್ಯುಟರೋ ಅಂದರೆ ಬೆಣ್ಣೆಎಂದು ಅರ್ಥವಿದೆ. ಬ್ಯುಟಿರಿಕ್ ಆಮ್ಲವನ್ನು ಕ್ರಿ.ಶ.೧೮೧೪ ಸಂವತ್ಸರದಲ್ಲಿ ಫ್ರೆಂಚ್ ದೇಶದ ರಸಾಯನ ಶಾಸ್ತ್ರಜ್ಞ ಮೈಕೇಲ್ ಯುಜೆನ್ ಚೆವ್ರೆಲ್( )ಪತ್ತೆ ಹಚ್ಚಿದ್ದಾನೆ.. == ರಚನಾ-ಸ್ವರೂಪ == ಬ್ಯುಟ್ರಿಕ್ ಕೊಬ್ಬಿನ ಆಮ್ಲದಲ್ಲಿ ನಾಲ್ಕುಕಾರ್ಬನ್ಅಣುಗಳು, ೮ ಹೈಡ್ರೋಜನ್ಅಣುಗಳು, ಎರಡು ಆಕ್ಸಿಜನ್ಆಣುಗಳಿರುತ್ತವೆ. ಇದರ ರಚನಾ ಸಂಕೇತ CH3CH2CH2COOH ಅಥವಾC4H8O2.ಬ್ಯುಟಿರಿಕ್ ಆಮ್ಲ ಬಣ್ಣ ರಹಿತವಾಗಿ,ದ್ರವರೂಪದಲ್ಲಿರುತ್ತದೆ.ಬೆಣ್ಣೆಯಲ್ಲಿ ಟ್ರಿಗ್ಲಿಜರಾಯೀಡ್ ರೂಪದಲ್ಲಿರುತ್ತದೆ ಕಮಟಾಗಿದ ಬೆಣ್ಣೆಯಿಂದ ಹೈಡ್ರೋಲಿಸಿಸ್ ಚರ್ಯದಿಂದ ಬ್ಯುಟಿರಿಕ್ ಆಮ್ಲ ಉತ್ಪನ್ನವಾಗುತ್ತದೆ. ಬ್ಯುಟಿರಿಕ್ ಆಮ್ಲ ಕಮಟು ವಾಸನೆ ಹೊಂದಿರುತ್ತದೆ. ಬ್ಯುಟಿರಿಕ್ ಆಮ್ಲವು ನೀರಿನಲ್ಲಿ ಕರಗುತ್ತದೆ. ಇನ್ನೂ ಇಥೆನಾಲ್, ಇಥರ್ ಗಳಲ್ಲಿ ಕರಗುತ್ತದೆ. ಬ್ಯುಟಿರಿಕ್ ಆಮ್ಲ ಜಿಡ್ಡಾಗಿರುತ್ತದೆ. ಬ್ಯುಟಿರಿಕ್ ಆಮ್ಲದ ಗುಣಗಳ ಪಟ್ಟಿ ಲಭ್ಯತೆ:ಬೆಣ್ಣೆಯಲ್ಲಿ ೩-೪% ವರೆಗೆ ಸಿಗುತ್ತದೆ. ಇದನ್ನುಮೇಕೆ, ಕುರಿ, ಎಮ್ಮೆಗಳ ಹಾಲಿನಲ್ಲಿ ಕಂಡು ಹಿಡಿಯಲಾಗಿದೆ. ಸಕ್ಕರೆ,ಗಂಜಿ ಪದಾರ್ಥಗಳನ್ನು ಕಿಣ್ವಪ್ರಕ್ರಿಯೆಗೆ ಒಳಗೊಂಡಿಸುವುರಿಂದ ಬ್ಯುಟಿರಿಕ್ ಆಮ್ಲವನ್ನು ಉತ್ಪನ್ನ ಮಾಡಬಹುದು. ಬ್ಯುಟಿರಿಕ್ ಆಮ್ಲದ ಉತ್ಪನ್ನಗಳು ಪೊಟಾಷಿಯಂ ಡೈಕ್ರೋಮೇಟ್ ಅಥವಾ ಸಲ್ಫ್ಯೂರಿಕ್ ಆಮ್ಲವನ್ನು ಉಪಯೋಗಿಸಿ ಬ್ಯುಟಿರಿಕಿಕ್ ಆಮ್ಲದಿಂದ ಕಾರ್ಬನ್ ಡೈಆಕ್ಸೈಡ್, ಎಸಿಟಿಕ್ ಆಮ್ಲವನ್ನು ಉತ್ಪನ್ನಮಾಡಲಾಗುತ್ತದೆ. ಬ್ಯುಟಿರಿಕ್ ಆಮ್ಲವನ್ನು ಪೆರಾಕ್ಸೈಡ್ ಜೊತೆ ಆಕ್ಸಿಡೇಸನ್ ಚರ್ಯಗೆ ಒಳಗೊಂಡಿಸಿ ಎಸಿಟಿಕ್ ಆಮ್ಲ, ಏಸಿಟೊನ್ ಮುಂತಾದುವುಗಳನ್ನು ಉತ್ಪನ್ನ ಮಾಡಲಾಗುತ್ತದೆ. ಬ್ಯುಟಿರಿಕ್ ಆಮ್ಲದಿಂದ ಬ್ಯುಟರೆಟ್ಸ್ ಎನ್ನುವ ಆಮ್ಲದ ಲವಣಗಳನ್ನು, ಬ್ಯುಟನೋಟ್ಸು ಎನ್ನುವ ಎಸ್ಟರುಗಳನ್ನು ತಯಾರಿಸುತ್ತಾರೆ. == ಇವನ್ನೂ ನೋಡಿ == ಕೊಬ್ಬಿನ ಆಮ್ಲ ಪರ್ಯಾಪ್ತ ಆಮ್ಲ == ಬಾಹ್ಯಾಕೊಂಡಿಗಳು == ://...//-butyric_acid. 2014-11-04 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖನ == == == : , , . (1911). Encyclopædia (11th .). . {{ }}: : |= |HIDE_PARAMETER= (); |= (); |= () == == 1334 2004 / .